We are working on language stuff, please wait it will come in future

Okay

ಉದ್ಯೋಗಸ್ಥ ಗೃಹಿಣಿಯರು ಅಳವಡಿಸಿಕೊಳ್ಳಬಹುದಾದ 5 ತಂತ್ರಗಳು

Rupa Sharat

All About Child

ಇಲ್ಲಿದೆ ಎಲ್ಲಾ ತಾಯಿಯಂದಿರಿಗೂಂದು ಸಿಹಿಸುದ್ದಿ “ಮನೆ ಮತ್ತು ಉದ್ಯೋಗ ಎರಡನ್ನೂ ನಿಭಾಯಿಸಲು ಸರಿಯಾದ ಮಾರ್ಗ ಎಂಬುದಿಲ್ಲ”. ಉಳಿದೆಲ್ಲವನ್ನೂ ಮೀರಿಸುವ ಏಕೈಕ ಮ್ಯಾಜಿಕ್ ಸೂತ್ರವೆಂದರೆ ಎರಡೂ ಸ್ಥಳಗಳಲ್ಲಿ ಗುಣಮಟ್ಟದ ಸಮಯವನ್ನು ಕಳೆಯುವುದು. ನಿಮ್ಮಲ್ಲಿ  ಸಾಧ್ಯವಾದಷ್ಟು ಉತ್ತಮವಾದದ್ದನ್ನು ನೀಡಿ ಮತ್ತು ನಿಮ್ಮ ಮೇಲೆ ಸ್ವನಂಬಿಕೆಯಿರಲಿ ಹಾಗೂ ಮನೆ ಮತ್ತು ಉದ್ಯೋಗದ ಪ್ರತೀ ಕ್ಷಣವನ್ನೂ ಖುಷಿಯಿಂದ ಅನುಭವಿಸಿ. ಈಗ 5 ಪರಿಣಾಮಕಾರಿಯಾದ ಅತ್ಯುತ್ತಮ ತಂತ್ರಗಳನ್ನು ತಿಳಿಯೋಣ.

1)ಕುಟುಂಬಕ್ಕಾಗಿ ಸಮಯ ನೀಡಿ:

ಕುಟುಂಬಕ್ಕಾಗಿ ಸಮಯ ನೀಡುವುದು ಪಾಲಕರ ಮುಖ್ಯ ಆದ್ಯತೆಯಾಗಿರಬೇಕು. ಇದು ಸವಾಲಿನ ಕೆಲಸವಾಗಿರಬಹುದು ಆದರೆ ಕುಟುಂಬದ ಪ್ರೀತಿ ಮತ್ತು ಆಕರ್ಷಣೆ ಪಡೆಯುವುದು ಪ್ರತಿಯೊಂದು ಮಗುವಿನ ಹಕ್ಕಾಗಿರುತ್ತದೆ. ಒಂದು ಮುಖ್ಯ ತಂತ್ರವೇನೆಂದರೆ ಬೇಗ ಮಲಗುವುದು ಮತ್ತು ಬೇಗ ಏಳುವುದು. ಇದು ತಾಯಂದಿರಿಗೆ ಮುಂದಿನ ದಿನವನ್ನು ಯೋಜಿಸಲು ಸಾಕಷ್ಟು ಸಮಯವನ್ನು ನೀಡುವುದಲ್ಲದೆ, ಮಗು ಎಚ್ಚರಗೊಳ್ಳುವ ಮೊದಲು ಅವರು ದಿನನಿತ್ಯದ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.

2)ಚಟುವಟಿಕೆಗಳನ್ನು ಯೋಜಿಸುವುದು / ನಿಗದಿಪಡಿಸುವುದು ಮತ್ತು ಹರಡುವುದು:

ಇಂದಿನ ದಿನಗಳಲ್ಲಿ ಕೆಲಸಕ್ಕೆ ಹೋಗುವ ಗೃಹಿಣಿಯರು ತಮ್ಮ ದಿನನಿತ್ಯದ ಜಂಜಾಟದಲ್ಲಿ ಬಹು ವಿಧದ ಕೆಲಸ ಕಾರ್ಯಗಳನ್ನೂ ನಿರ್ವಹಿಸಬೇಕಾಗಿರುವದು ಸರ್ವೇ ಸಾಮಾನ್ಯ. ಮುಂಚಿನ ದಿನದ ಸಾಯಂಕಾಲದಂದೇ, ಕೆಲಸಗಳನ್ನು ಪಟ್ಟಿ ಮಾಡಿಕೊಂಡು ಸಾಧ್ಯವಾದಷ್ಟು ಕೆಲಸಗಳನ್ನು ಮುಂಚಿನ ದಿನವೇ ಮುಗಿಸಿಕೊಳ್ಳುವುದು ಗೃಹಿಣಿಯರಿಗೆ ತುಂಬಾ ಸಹಾಯಕವಾಗಿರುತ್ತದೆ. ಮನೆಕೆಲಸಗಳನ್ನು ಹೊರತಾಗಿಯೂ ಗೃಹಿಣಿಯರಿಗೆ ಸಾಮಾನುಗಳನ್ನು ತರುವುದು, ಬಿಲ್ ಗಳನ್ನು ಪಾವತಿಸುವುದು, ಶಾಲೆಯಲ್ಲಿನ ಸಭೆಗಳಂತಹ ಇತರ ಕೆಲಸಗಳಿರುತ್ತವೆ. ವಾರಾಂತ್ಯದಲ್ಲಿ ಈ ಎಲ್ಲಾ ವಿಷಯಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಬೇಕು ಮತ್ತು ಎಲ್ಲಾ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು‌.

3)ಕೆಲಸ ಮತ್ತು ಜೀವನದಲ್ಲಿ ಸಂಯಮ:

ವೈಯಕ್ತಿಕ ಮತ್ತು ಕೆಲಸ ಎರಡನ್ನೂ ನಿಭಾಯಿಸುವುದು ಬಹಳ ಒತ್ತಡದಾಯಕ ಮತ್ತು ಸವಾಲಿನ ಕೆಲಸವಾಗಿದೆ.ಹೆಚ್ಚಿನ ತಾಯಂದಿರು ಆಫೀಸಿನಲ್ಲಿರುವಾಗ ಮಗುವಿನ ಬಗ್ಗೆ ಮತ್ತು ಮನೆಯಲ್ಲಿರುವಾಗ ಆಫೀಸಿನ ಕೆಲಸಗಳ ಬಗ್ಗೆ ಯೋಚಿಸುತ್ತಿರುತ್ತಾರೆ. ಇವೆರಡೂ ಬೇರೆ ಬೇರೆ ಪಾತ್ರಗಳು ಎಂಬುದನ್ನು ಪಾಲಕರು ಪೂರ್ಣಗೊಳಿಸಬೇಕಾಗುತ್ತದೆ. ಕೆಲಸದ ಸ್ಥಳದಲ್ಲಿ ತಾಯಂದಿರು ಸಂಪೂರ್ಣ ಬೆಂಬಲ ಮತ್ತು ಗೌರವವನ್ನು ಪಡೆದುಕೊಳ್ಳಲು ನಿಗದಿತ ಕೆಲಸವನ್ನು ನಿಗದಿತ ಗಡುವಿನೊಳಗೆ ಪೂರ್ಣಗೊಳಿಸಬೇಕಾಗುತ್ತದೆ. ಬಿಡುವಿನ ವೇಳೆಯಲ್ಲಿ ವೈಯಕ್ತಿಕ ಕೆಲಸ ಮತ್ತು ಕುಟುಂಬದ ಬಗ್ಗೆ ಗಮನಹರಿಸಬಹುದು.

ವೈಯಕ್ತಿಕ ಕೆಲಸವನ್ನು ಕಾರ್ಯಕ್ಷೇತ್ರದಿಂದ ದೂರವಿರಿಸಲು ಸೂಚಿಸಲಾಗುತ್ತದೆ.

4)ತಿರಸ್ಕರಿಸುವುದನ್ನು ಕಲಿಯಿರಿ:

ಬದ್ಧತೆ ಮತ್ತು ಸಮಯದ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ಅದು ಸಾಧ್ಯವಿಲ್ಲ ಎಂದು ತಿಳಿದಿದ್ದರೂ ಸಹ ಹೆಚ್ಚಿನ ಮಹಿಳೆಯರು ಒಂದು ಕೆಲಸಕ್ಕೆ “ಇಲ್ಲ” ಎಂದು ಹೇಳುವುದು ಸವಾಲಿನ ಕೆಲಸ ಎಂದು ಭಾವಿಸುತ್ತಾರೆ.

ಇದು ವಿಶಿಷ್ಣ ಲಕ್ಷಣವಾಗಿದ್ದು, ಹೆಚ್ಚಿನ ಕೆಲಸ ಮಾಡುವ ಮಹಿಳೆಯರು ತಮ್ಮ ಆರಂಭಿಕ ವೃತ್ತಿ ಜೀವನದಲ್ಲಿ ಅಭಿವೃದ್ಧಿ ಹೊಂದುತ್ತಾರೆ ಏಕೆಂದರೆ ಹೆಚ್ಚಿನವರು ” ಇಲ್ಲ” ಎಂದು ಹೇಳುವುದು ಅವರ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾವಿಸುತ್ತಾರೆ. ಹೆಚ್ಚಿನ ಕೆಲಸವನ್ನು ತೆಗೆದುಕೊಳ್ಳುವುದು (ವಿಶೇಷವಾಗಿ ಯೋಜಿತವಲ್ಲದ ಕೆಲಸ) ಒತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಕೆಲಸದ ಸ್ಥಳದಲ್ಲಿ ಮತ್ತು ಮನೆಯಲ್ಲಿ ವೇಳಾಪಟ್ಟಿಯನ್ನು ಸಂಪೂರ್ಣವಾಗಿ ಅಡ್ಡಿಪಡಿಸುತ್ತದೆ.

5)ಸಹಾಯಕ್ಕಾಗಿ ಕರೆಮಾಡಿ:

ತಾಯಂದಿರು ತಾವು ಅತಿಮಾನುಷರು ಎಂದು ಭಾವಿಸಬಾರದು. ಇವರು ಅತಿಮಾನುಷರಲ್ಲ. ಉದ್ಯೋಗ ಮತ್ತು ಮನೆಯ ಎಲ್ಲಾ ಕೆಲಸಗಳನ್ನು ಅವರು ತಾವೇ ಸ್ವಂತವಾಗಿ ಮಾಡಲು ಆಗುವುದಿಲ್ಲ.

ಮೈಕ್ರೊ ಮ್ಯಾನೇಜ್ಮೆಂಟ್ ಆಪತ್ತಿಗೆ ಸೂಕ್ತವಾದ ವಿಧಾನವಾಗಿದೆ ಮತ್ತು ಇದು ಮನೆಯಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಆರೋಗ್ಯ ಮತ್ತು ಸಂಬಂಧಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಸಹಾಯಕ್ಕಾಗಿ ಕರೆ ಬೇರೆಯವರನ್ನು ಕರೆಯುವುದನ್ನು ಕಲಿಯುವುದು ಇಲ್ಲಿ ಪ್ರಮುಖವಾಗಿದೆ. ಕೆಲಸ ಮಾಡುವ ತಾಯಂದಿರು ಕೆಲವು ಕಾರ್ಯಗಳನ್ನು ನಿಯೋಜಿಸಬೇಕಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು, ಇದು ಮನೆಯಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಅನ್ವಯಿಸುತ್ತದೆ. ಮನೆಯಲ್ಲಿ ಮಹಿಳೆಯರು ಸಂಗಾತಿಯ ಅಥವಾ ಇತರ ಕುಟುಂಬ ಸದಸ್ಯರ ಸಹಾಯ ಮತ್ತು ಉದ್ಯೋಗದ ಸ್ಥಳದಲ್ಲಿ ಸಹೊದ್ಯೋಗಿಗಳನ್ನು ಸಹಾಯಕ್ಕಾಗಿ ಕರೆ ಮಾಡಬೇಕಾಗುತ್ತದೆ.

2 ಸಮಾನ ಮೌಲ್ಯವಿರುವ ಲೋಕಗಳನ್ನು ಸಮತೋಲನದಿಂದ ಕಾಯ್ದುಕೊಳ್ಳುವುದು ತುಂಬಾ ಕಷ್ಟವಾದ ಕೆಲಸ.ಹೆಚ್ಚಿನ ತಾಯಂದಿರು ಈ ಎರಡೂ ಪಾತ್ರಗಳನ್ನು ನಿಭಾಯಿಸುವುದರಲ್ಲಿ ನಿಸ್ಸೀಮರಾಗಿರುತ್ತಾರೆ.

ಎರಡೂ ಲೋಕವನ್ನು ನಿರ್ವಹಿಸುವುದು ಹೊಸ ಕೌಶಲ್ಯಗಳನ್ನು ಕಲಿಯುವುದರ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತದೆ. ಒಬ್ಬ ಮಹಿಳೆ ತನ್ನ ಜೀವನದಲ್ಲಿ ಹೊಸ ಹಂತದ ಯಶಸ್ಸನ್ನು ಆಚರಿಸುವುದು ಕೂಡಾ ಅಷ್ಟೇ ಮುಖ್ಯ ಎಂಬುದನ್ನು ನಾವು ಮರೆಯಬಾರದು.( ತಾಯಿ ಮತ್ತು ಯಶಸ್ವಿ ಉದ್ಯೋಗ ಮಾಡುವ ಮಹಿಳೆ)

Your feedback please

Like
Like Wow Sad
800000

Share & Save

What is your Reaction?

We appreciate your feedback

Feedback (Optional)