We are working on language stuff, please wait it will come in future

Okay

ಮಕ್ಕಳಲ್ಲಿ ಉತ್ತಮ ನಡುವಳಿಕೆಗಳನ್ನು ಬೆಳೆಸಲು 5 ತಂತ್ರಗಳು

Rupa Sharat

All About Child

ಈ ಲೇಖನವು ನಮ್ಮ ಹಿಂದಿನ ಲೇಖನದ (ದೈಹಿಕ ಕಿರುಕುಳದಿಂದಾಗುವ 5 ತೊಂದರೆಗಳು)ಮುಂದಿನ ಭಾಗವಾಗಿದೆ.

ಇದರಲ್ಲಿ ಅಶಿಸ್ತು ಅಥವಾ ದುರ್ನಡತೆಗಳನ್ನು ಸರಿಪಡಿಸಲು ಇರುವ ಉತ್ತಮ ನಡುವಣಿಕೆಗಳ ಬಗ್ಗೆ ಚರ್ಚಿಸಲಾಗುತ್ತದೆ.ಆದರೆ ಕೆಲವು ಸಂದರ್ಭಗಳಲ್ಲಿ ಮಕ್ಕಳು ಒಪ್ಪಲಾಗದ ನಡುವಳಿಕೆಗಳನ್ನು ತೋರುತ್ತಾರೆ. ಇಂತಹ ಸಮಯದಲ್ಲಿ ವಯಸ್ಕರು ತಮ್ಮ ಪ್ರೌಢತ್ವದಿಂದ ಸನ್ನಿವೇಶವನ್ನು ನಿಭಾಯಿಸಬೇಕಾಗುತ್ತದೆ‌.ಇದನ್ನು ಆಡಲು ಸುಲಭ ಆದರೆ ನಿಭಾಯಿಸುವುದು ಕಷ್ಟ.

ಮಕ್ಕಳು ನಿರಂತರವಾಗಿ ಪ್ರಯೋಗ ಮಾಡುತ್ತಿರುತ್ತಾರೆ ಮತ್ತು ಒಂದು ಸನ್ನಿವೇಶವನ್ನು ನಿಭಾಯಿಸಲು ಇರುವ ಹಲವಾರು ದಾರಿಗಳನ್ನು ತಿಳಿದುಕೊಳ್ಳುತ್ತಾ ಹೋಗುತ್ತಾರೆ. ವಯಸ್ಕರನ್ನು ಗಮನಿಸುವಲ್ಲಿ ಮಕ್ಕಳು ಅತ್ಯುತ್ತಮರಾಗಿರುತ್ತಾರೆ. ತಮ್ಮ ಸುತ್ತ ಮುತ್ತಲಿನ ವಯಸ್ಕರ ಪ್ರತಿಕ್ರಿಯೆಗಳು ಇವರ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರುತ್ತವೆ.ಈ ಲೇಖನವು ಮಕ್ಕಳ ಜೊತೆಗಿದ್ದಾಗ ವಯಸ್ಕರು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳ ಬಗ್ಗೆ ತಿಳಿಸುತ್ತದೆ.

ಪೋಷಕರು ಹೇಗೆ ಮಕ್ಕಳಲ್ಲಿ‌ ಉತ್ತಮ ನಡುವಳಿಕೆಗಳನ್ನು ಬೆಳೆಸಬೇಕು?

1)ಸ್ವನಿಯಂತ್ರಣವನ್ನು ಬೆಳೆಸಿ:

ಮಕ್ಕಳು ಏನಾದರೂ ತಪ್ಪು ಮಾಡಿದಾಗ ಪೋಷಕರು ಏರು ಧ್ವನಿಯಲ್ಲಿ ಬೈಯುವುದು ಅಥವಾ ಹೊಡೆಯುವುದು ಸಾಮಾನ್ಯ ಸಂಗತಿಯಲ್ಲ.ಈ ತರಹ ಮಾಡುವುದರಿಂದ ಮಗುವು ಆ ಕ್ಷಣಕ್ಕೆ ಶಾಂತವಾಗಬಹುದು ಅಥವಾ ಅಕ್ಷಣಕ್ಕೆ ಮಾತ್ರ ಪೋಷಕರು ಹೇಳಿದ್ದನ್ನು ಕೇಳಬಹುದು.ಆದರೆ ಈ ವಿಧಾನದಿಂದ ಮಗುವಿನ ವರ್ತನೆ ಮತ್ತು ನಡುವಳಿಕೆಯಲ್ಲಿ ಯಾವುದೇ ಧನಾತ್ಮಕ ಬದಲಾವಣೆ ಉಂಟಾಗುವುದಿಲ್ಲ.ಇಂತಹ ವಿಧಾನಗಳು ಮಕ್ಕಳಲ್ಲಿ ಪೋಷಕರ ಬಗ್ಗೆ ಭಯವನ್ನು ಹುಟ್ಟಿಸುತ್ತವೆಯೇ ವಿನಃ ತಮ್ಮ ವರ್ತನೆಯ ಪರಿಣಾಮಗಳ ಅರಿವನ್ನು ಮೂಡಿಸುವುದಿಲ್ಲ.

ಮೊದಲ ಪರಿಹಾರವೆಂದರೆ ಪೋಷಕರು ಸ್ವ-ನಿಯಂತ್ರಣವನ್ನು ಕಲಿತುಕೊಂಡು ಸಿಟ್ಟಿನಿಂದ ವಿಮುಖರಾಗಬೇಕು. ಸಾಮಾನ್ಯ ಮತ್ತು ಶಾಂತಚಿತ್ತವಾದ ಧ್ವನಿ ಸಮಸ್ಯೆಯನ್ನು ಪ್ರತಿನಿಧಿಸುತ್ತದೆಯೇ ಹೊರತು ಮಗುವನ್ನು ಅಪರಾಧಿ ಎಂದು ಪ್ರತಿಬಿಂಬಿಸುವುದಿಲ್ಲ‌.ಉದಾಹರಣೆಗೆ ಮಗುವು ನಿಮ್ಮ ಎಚ್ಚರಿಕೆಯ ಬಳಿಕವೂ ಒಂದು ಲೋಟ ನೀರನ್ನು ಚೆಲ್ಲಿದರೆ “ಏನು ಮಾಡಿದೆ ನೋಡು! ಕೆಟ್ಟ ಹುಡುಗ/ಹುಡುಗಿ,ನನ್ನ ಮಾತನ್ನು ಯಾವಾಗಲೂ ಕೇಳುವುದಿಲ್ಲ.” ಎಂದು ಬೈಯುವ ಬದಲು “ನೀರು ಚೆಲ್ಲಿಹೋಯಿತಲ್ಲ, ನನಗೆ ಅದನ್ನು ಸ್ವಚ್ಛ ಮಾಡು ಸಹಾಯ ಮಾಡುತ್ತೀಯಾ ?” ಎಂದು ಪ್ರಶ್ನಿಸಿದರೆ ಮಗುವು “ಮುಂದಿನ ಸಲದಿಂದ ಜೋಪಾನವಾಗಿರುತ್ತೇನೆ ” ಎಂದು ಉತ್ತರ ಕೊಡುತ್ತದೆ.ಈ ವಿಧಾನಗಳು ಮಗುವಿನಲ್ಲಿ ಧೈರ್ಯವನ್ನು ತುಂಬುತ್ತದೆ.ಮಗುವು ಕೆಲಸಗಳನ್ನು ಮತ್ತೆ ಮತ್ತೆ ಮಾಡಲು ಇಚ್ಛಿಸುತ್ತದೆ ಮತ್ತು ಕೆಲಸಗಳಿಂದ ದೂರ ಓಡಲು ಇಷ್ಟ ಪಡುವುದಿಲ್ಲ.

2)ಮಕ್ಕಳ ಒಳ್ಳೆಯ ಗುಣಗಳನ್ನು ಹೊಗಳುವುದರಿಂದಾಗುವ ಪರಿಣಾಮಗಳು:

ಮಕ್ಕಳ ದುರ್ನಡತೆಗಳು ಗಂಭೀರ ಸಮಸ್ಯೆಯಾಗಿರುತ್ತದೆ.ಮಕ್ಕಳ ಒಳ್ಳೆಯ ಗುಣಗಳನ್ನು ಗುರುತಿಸುವುದು ಕೂಡಾ ತುಂಬಾ ಮುಖ್ಯವಾದ ಕೆಲಸ ಎಂಬುದನ್ನು ಪೋಷಕರು ಅರಿತುಕೊಳ್ಳಬೇಕಾಗಿದೆ.ಅತ್ಯಂತ ಪರಿಣಾಮಾತ್ಮಕ ತಂತ್ರವೇನೆಂದರೆ ಮಕ್ಕಳು ಒಳ್ಳೆಯ ಕೆಲಸ /ವರ್ತನೆ ಮಾಡಿದಾಗ ನಿಮ್ಮ ಕೆಲಸ/ವರ್ತನೆಯು ಪ್ರಶಂಗೆ ಯೋಗ್ಯವಾದವು ಎಂದು ತೋರ್ಪಡಿಸುವುದು.ಪೋಷಕರು ಇದನ್ನು ತಮ್ಮ ಮನಸ್ಸಿಗೆ ತೋಚಿದಂತೆ ಬಳಸಬಾರದು. ಈ ತಂತ್ರವು ಮಕ್ಕಳ ನಡತೆಯ ಮೇಲೆ ಬಹುಕಾಲ ಇರುವ ಧನಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಮಗುವು ಒಳ್ಳೆಯ ಮತ್ತು ಕೆಟ್ಟ ನಡತೆ ತೋರುವುದರಿಂದ ಬರುವ ಪ್ರತಿಕ್ರಿಯೆಗಳ ವ್ಯತ್ಯಾಸವನ್ನು ಅರಿಯಲು ಸಹಾಯಕವಾಗುತ್ತದೆ.ಮಕ್ಕಳು ಹಲವಾರು ಸಲ ಪೋಷಕರ ಗಮನ ಸೆಳೆಯಲು ಈ ತರಹದ ದುರ್ನಡತೆಗಳನ್ನು ತೋರುತ್ತದೆ. ಪೋಷಕರು ದುರ್ನಡತೆ ತೋರಿದಾಗ ಬೇಗನೆ ಪ್ರತಿಕ್ರಿಯೆ ನೀಡುತ್ತಾರೆಂದು ಮಕ್ಕಳಿಗೆ ತಿಳಿದಿರುತ್ತದೆ.

3)ಕೋಪಗೊಳ್ಳದ ಗಂಭೀರವಾಗಿ ವರ್ತಿಸಿ:

ಮಕ್ಕಳ ಒಳ್ಳೆಯ ಗುಣಗಳನ್ನು ಹೊಗಳುವುದರ ಜೊತೆಗೆ ಪೋಷಕರು ಗಂಭೀರವಾಗಿ ಇರಬೇಕು ಮತ್ತು ನಿರ್ದಿಷ್ಟವಾದ ಚೌಕಟ್ಟನ್ನು ಹಾಕಿರಬೇಕು. ಮಕ್ಕಳಿಗೆ ದುರ್ನಡತೆಗಳನ್ನು ತೋರುವುದರಿಂದಾಗುವ ಪರಿಣಾಮಗಳು ಚೆನ್ನಾಗಿ ತಿಳಿದಿರಬೇಕು.ಮಕ್ಕಳಿಗೆ ಅರ್ಥವಾಗುವಂತೆ ಸರಳವಾಗಿ ವಯ್ಯಾರಗಳನ್ನು ತೋರದೆ ಅರ್ಥ ಮಾಡಿಸಬೇಕು. ಮಕ್ಕಳಿಂದ ತುಂಬಾ ದೂರದಿಂದ ಅಥವಾ ಎತ್ತರದಿಂದ ಮಾತನಾಡುವ ಬದಲು ಮಕ್ಕಳ ಕಣ್ಣಿನ ಸಮಕ್ಕೆ ಕುಳಿತು ಮಾತನಾಡಿ. ಈ ಪ್ರಕ್ರಿಯೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಆರೋಗ್ಯಕರ ರೀತಿಯಲ್ಲಿ ಮಕ್ಕಳಿಗೆ ಧೃಢವಾದ ಭಾವನೆಗಳೊಂದಿಗೆ ವ್ಯವಹರಿಸುವ ಕಲೆಯನ್ನು ತಿಳಿಸಿಕೊಡಬೇಕು.

ಪೋಷಕರು ಸಂಕ್ಷಿಪ್ತ,ಸರಳ ಮತ್ತು ಬೆದರಿಕೆ ರಹಿತವಾದ ಕಟ್ಟುಪಾಡುಗಳನ್ನು ವಿಧಿಸಬೇಕು.ಮತ್ತು ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿವುವಂತೆ ನೋಡಿಕೊಳ್ಳಬೇಕು.ಸ್ವ-ನಿಯಂತ್ರಣ ಕಳೆದುಕೊಳ್ಳದೆ ಮಕ್ಕಳಿಗೆ ತಮ್ಮ ಕಟ್ಟುಪಾಡುಗಳನ್ನು ನೆನಪಿಸುವುದನ್ನು ಪೋಷಕರಿಗೆ ಈ ಉಪಾಯ ತಿಳಿಸುತ್ತದೆ.ಸಮಯ ಕಳೆದಂತೆ ಮಗುವು ಯಾವುದು ಸ್ವೀಕಾರಾರ್ಹ ಮತ್ತು ಯಾವುದಯ ಸ್ವೀಕಾರಾರ್ಹವಲ್ಲ ಎಂಬುದನ್ನು ತಿಳಿಯುತ್ತದೆ.

4)ಪೋಷಕರು ಹೇಗೆ ಉಳಿದವರಿಂದ ತಮ್ಮನ್ನು

ನಡೆಸಿಕೊಳ್ಳುಲು ಬಯಸುತ್ತಾರೋ ಹಾಗೆಯೇ ತಮ್ಮ ಮಕ್ಕಳನ್ನು ನಡೆಸಿಕೊಳ್ಳಬೇಕು.ಸಂದಿಗ್ಧ ಪರಿಸ್ಥಿತಿಗಳಲ್ಲಿ ಯಾವ ಶಬ್ದಗಳು ಮತ್ತು ಯಾವ ಧ್ವನಿಯಲ್ಲಿ ಮಾತನಾಡಬೇಕು ಎಂಬುದರ ಬಗ್ಗೆ ಎಚ್ಚರವಿರಬೇಕು.ಉದಾಹರಣೆಗೆ: ಒಬ್ಬ ಆತುರದ ಡ್ರೈವರ್ ತಮ್ಮ ವಾಹನವನ್ನು ತಪ್ಪು ಬದಿಯಿಂದ ಓವರ್ ಟೇಕ್ ಮಾಡಿದಾಗ ಅವನನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಮೊದಲು ಯೋಚಿಸಬೇಕು.ಹೆಚ್ಚಿನ ವಯಸ್ಕರು ಅಂತಹ ಸಂದರ್ಭದಲ್ಲಿ ಅಶ್ಲೀಶ ಪದಗಳನ್ನು ಬಳಸುತ್ತಾರೆ.”ಶಾಂತವಾಗಿರು”,ತಾಳ್ಮೆ ಕಳೆದುಕೊಳ್ಳಬೇಡ” “ಒಳ್ಳೆಯ ಪದಗಳನ್ನು ಬಳಸು” ಎಂದು ಉಪದೇಶ ಮಾಡುವ ಪಾಲಕರು ಈ ರೀತಿ ನಡುವಳಿಕೆ ತೋರಿದಾಗ ಮಕ್ಕಳು ಗೊಂದಲಕ್ಕೀಡಾಗುತ್ತಾರೆ.ಅವರು ಈ ಎಲ್ಲಾ ನಿಯಮಗಳು ಕೇವಲ ಮಕ್ಕಳಿಗಾಗಿ ಮಾತ್ರ ಎಂದು ತಿಳಿಯುತ್ತಾರೆ.

5)ಆಯ್ಕೆಗಳನ್ನು ನೀಡುವುದರಿಂದ ಮಕ್ಕಳಿಗೆ ಸ್ವಾತಂತ್ರ್ಯ ನೀಡಿದಂತಾಗುತ್ತದೆ:

ಪೋಷಕರಿಗೆ ತಮ್ಮ ಮಕ್ಕಳು ಜವಾಬ್ದಾರಿಯಯತ ಮಕ್ಕಳಾಗಬೇಕು ಎನ್ನುವ ಆಸೆ ಇದ್ದರೆ ಮಕ್ಕಳು ಚಿಕ್ಕವರಾಗಿದ್ದಾಗಲೇ ಅವರಿಗೆ ಆಯ್ಕೆಗಳನ್ನು ನೀಡಬೇಕು.ಮಕ್ಕಳು ತಮಗೆ ನೀಡಿದ ಕೆಲಸಗಳನ್ನು ಮುಗಿಸಿ ತಾವು ಹೆಚ್ಚು ಜವಾಬ್ದಾರಿಯುತ ನಡುವಳಿಕೆ ಹೊಂದಿದ್ದೇವೆ ಎನ್ನುವುದನ್ನು ತೋರಿಸುವ ಧೃಡ ಸಂಕಲ್ಪ ಹೊಂದಿರುತ್ತಾರೆ. ಆಯ್ಕೆಗಳನ್ನು‌ ಮಾಡುವಲ್ಲಿ ಶಕ್ತರಿರುವ ಮಕ್ಕಳಲ್ಲಿ ಶಿಸ್ತನ್ನು ಬೆಳೆಸುವುದು ಪೋಷಕರಿಗೆ ಕಷ್ಟ ಎಂದೆನಿಸುವುದಿಲ್ಲ.

ಉದಾಹರಣೆಗೆ: ಪಾರ್ಕಿನಲ್ಲಿ ಮೋಜು ಮಾಡಿದ ಬಳಿಕ ಮಕ್ಕಳಿಗೆ ಮನೆಗೆ ವಾಪಾಸಾಗಲು ಮನಸ್ಸು ಬರುವುದಿಲ್ಲ.ಇಂತದ ಪರಿಸ್ಥಿತಿಗಳು ಪೋಷಕರನ್ನು ಹತಾಶೆ ಮತ್ತು ಕೋಪೋದ್ರೇಕಗೊಳಿಸುತ್ತವೆ.ಇಂತಹ ಸನ್ನಿವೇಶಗಳಲ್ಲಿ‌ಪಾಲಕರು ಈ ತರಹದ ಪ್ರಶ್ನೆಗಳನ್ನು ಕೇಳಬೇಕು”ನಾವು ಇನ್ನು 5 ನಿಮಿಷಗಳಲ್ಲಿ ಮನೆಗೆ ಹೋಗುತ್ತಿದ್ದೇವೆ.ನೀನು ಕೊನೆಯ 5 ನಿಮಿಷದಲ್ಲಿ ಜಾರುಬಂಡಿ ಆಡಲು ಇಚ್ಛಿಸುತ್ತೀಯೋ ಅಥವಾ ಈಜಲು ಬಯಸುತ್ತೀಯೋ?”ಇಂತಹ ಆಯ್ಕೆಗಳು ಮಕ್ಕಳು ಮತ್ತು ಪೋಷಕರ ನಡುವಿನ ಚೌಕಟ್ಟುಗಳನ್ನು ಸರಿಯಾಗಿ ಅರಿತುಕೊಳ್ಳಲು  ಸಹಾಯ ಮಾಡುತ್ತದೆ‌.ಇಂತಹ ಸಮಯದಲ್ಲಿ ಇಬ್ಬರಿಗೂ ಜಯಗಳಿಸಿದ ತೃಪ್ತಿ ಇರುತ್ತದೆ‌.

Your feedback please

Like
Like Wow Sad
600000

Share & Save

What is your Reaction?

We appreciate your feedback

Feedback (Optional)