We are working on language stuff, please wait it will come in future

Okay

ಅವಿಭಕ್ತ ಕುಟುಂಬದಲ್ಲಿ ಮಕ್ಕಳನ್ನು ಬೆಳೆಸಲು 5 ಪರಿಣಾಮಕಾರಿಯಾದ ಉಪಾಯಗಳು

Rupa Sharat

All About Child

ಕೆಲಸಕ್ಕೆ ಹೋಗುವ ಪಾಲಕರಿಗಂತೂ ಮಕ್ಕಳನ್ನು ಅವಿಭಕ್ತ ಕುಟುಂಬದಲ್ಲಿ‌ ಬೆಳೆಸುವುದು ವರದಾನವಾಗಿದೆ.ಈ ಲಾಭದ ಜೊತೆಗೆ ಹಲವಾರು ಸಂಕಷ್ಟಗಳು ಎದುರಾಗುವುದರಿಂದ ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮಗಳೂ ಆಗಬಹುದು.ಯಾವ ಮನೆಗಳಲ್ಲಿ ಅಜ್ಜ-ಅಜ್ಜಿಯಂದಿರು ಮಕ್ಕಳನ್ನು ಅತೀ ಮುದ್ದಿನಿಂದ ಬೆಳೆಸುತ್ತಾರೊ ,ಅಂತಹ ಮನೆಗಳಲ್ಲಿನ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮಗಳಾಗಬಹುದು.ಮಗುವಿನ ಪೋಷಕರಿಗೂ ತಮ್ಮ  ತಂದೆ ತಾಯಿಗೆ ಬುದ್ದಿ ಹೇಳುವುದು ಸವಾಲಿನ ಕೆಲಸವಾಗಿರುತ್ತದೆ.

ಅವಿಭಕ್ತ ಕುಟುಂಬದಲ್ಲಿ ವಾಸಿಸುವ ಹೆಚ್ಚಿನ ಪೋಷಕರಿಗೆ ಇವೆಲ್ಲಾ ಚಿರಪರಿಚಿತವಾದಂತಿರುತ್ತದೆ. ಈ ರೀತಿಯ ಪುನರಾವರ್ತಿತ ನಿದರ್ಶನಗಳು ಹೆಚ್ಚಾಗಿ ವಯಸ್ಕರ ನಡುವಿನ ಘರ್ಷಣೆಗೆ ಕಾರಣವಾಗುತ್ತವೆ‌.

ಹಲವಾರು ಬಗೆಯ ಮಾರ್ಗದರ್ಶನದ ಸಂಘರ್ಷದಿಂದ ತಪ್ಪಿಸಿ ಮಗುವನ್ನು ಅವಿಭಕ್ತ ಕುಟುಂಬದಲ್ಲಿ ಹೇಗೆ ಸರಿಯಾದ ದಾರಿಯಲ್ಲಿ ಬೆಳೆಸಬೇಕೆಂಬುದಕ್ಕಿರುವ ಕೆಲವು ತಂತ್ರಗಳನ್ನು ನೋಡೋಣ

1)ಒಪ್ಪಿದ ಚೌಕಟ್ಟು

ಪಾಲಕರು ಮತ್ತು ಅಜ್ಜ-ಅಜ್ಜಿಯಂದಿರು ಮಗುವಿನ ಸಾಮಾಜಿಕ ಬುದ್ದಿವಂತಿಕೆಯನ್ನು ಕಡೆಗಣಿಸಬಾರದು.ತಮಗೆ ಬೇಕಾಗಿದ್ದನ್ನು ಯಾರ ಬಳಿ ಹೇಗೆ ಪಡೆಯಬೇಕು ಎಂಬುದು ಮಕ್ಕಳಿಗೆ ತಿಳಿದಿರುತ್ತದೆ.ಪಾಲಕರು ಒಂದು ಚೌಕಟ್ಟನ್ನು ಹಾಕಿರಬೇಕು ಮತ್ತು ಮಗು ಮತ್ತು ವಯಸ್ಕರೆಲ್ಲರೂ ಅದನ್ನು ಪಾಲಿಸುವಂತೆ ನೋಡಿಕೊಳ್ಳಬೇಕು.

ಉದಾಹರಣೆಗೆ: 8 ಗಂಟೆಗೆ ಮಲಗುವ ಸಮಯ ಮತ್ತು 7 ಗಂಟೆಗೆ ಏಳುವ ಸಮಯ.ಈ ನಿಯಮಗಳನ್ನು ಯಾರೂ ಮೀರುವಂತಿರವಾರದು.ಮಗುವಿಗೆ ಮತ್ತು ಅಜ್ಜ-ಅಜ್ಜಿಯಂದಿರನ್ನು ಸೇರಿ ಎಲ್ಲಾ ವಯಸ್ಕರಿಗೂ ಈ ಚೌಕಟ್ಟಿನ ಬಗ್ಗೆ ಮಾಹಿತಿ ಒದಗಿಸುವುದೇ ನಮ್ಮ ಗುರಿ ಎಂದು ಪಾಲಕರಿಗೆ ತಿಳಿದಿರಬೇಕು.

2)ಮುಚ್ಚಿದ ಬಾಗಿಲ ಚರ್ಚೆಗಳು

ಕೆಲವೊಮ್ಮೆ ಪಾಲಕರು ಮತ್ತು ಅಜ್ಜ-ಅಜ್ಜಿಯಂದಿರ ನಡುವೆ ಅಥವಾ ಇತರ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳಾಗಬಹುದು.ಸರಿಯಾದ ಸಮಯದಲ್ಲಿ ಇವುಗಳನ್ನು ಪರಿಹರಿಸದಿದ್ದಲ್ಲಿ ಇವು ಉಗ್ರ ರೂಪ ತಾಳಬಹುದು.

ಮಕ್ಕಳು ಮುಗ್ಧರು ಎಂದು ಪೋಷಕರು ಮತ್ತು ಅಜ್ಜ-ಅಜ್ಜಿಯಂದಿರು  ಮತ್ತು ವಯಸ್ಕರು ತಿಳಿದುಕೊಳ್ಳಬೇಕು, ಅವರು ಆಗಾಗ್ಗೆ  ಒಳಗಿನ ವಿಚಾರಗಳನ್ನು ತಿಳಿದುಕೊಳ್ಳುತ್ತಾರೆ ಮತ್ತು ಇದರ ಪರಿಣಾಮವಾಗಿ, ಅವರು ಇನ್ನೊಬ್ಬರ ವಿರುದ್ಧ ವ್ಯತಿರಿಕ್ತ ನಡುವಳಿಕೆಗಳನ್ನು ತೋರಲು ಆರಂಭಿಸುತ್ತಾರೆ.

ಹಾಗಾಗಿ ಪೋಷಕರು ಅಥವಾ ಅಜ್ಜ-ಅಜ್ಜಿಯಂದಿರು ಅಥವಾ ಉಳಿದವರು ,ಸಮಸ್ಯೆಗಳು ಅಥವಾ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಒಂದು ಕೋಣೆಯಲ್ಲಿ ಕೂತು ಮಕ್ಕಳಿಗೆ ತಿಳಿಯದಂತೆ ಬಗೆಹರಿಸಿಕೊಳ್ಳುವುದು ಸೂಕ್ತ.ಮಧ್ಯಂತರದಲ್ಲಿ, ಸಂಘರ್ಷವು ಬಗೆಹರಿಯುವವರೆಗೆ, ವಯಸ್ಕರು ಮಕ್ಕಳನ್ನು “ಒಂದು ತಂಡ” ಎಂದು ಪರಿಗಣಿಸುವುದು ಸೂಕ್ತ.ಒಬ್ಬರು ಮಗುವನ್ನು ಸರಿಪಡಿಸುವಾಗ, ಇತರರು ಮಧ್ಯಪ್ರವೇಶಿಸಬಾರದು ಮತ್ತು ವಿರೋಧಿಸಬಾರದು. ಮುಚ್ಚಿದ ಬಾಗಿಲುಗಳ ಹಿಂದೆ ಉಳಿದವರು ತಮ್ಮ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಬೇಕು.

3)ಮಗುವಿಗೆ ಒಬ್ಬನೆ‌ ಒಡಯನಿರಬೇಕು.

ಮಗುವಿಗೆ ಒಬ್ಬರೇ ಒಡೆಯ(ಬಾಸ್) ಇರಬೇಕು ಮತ್ತು ಅದು ಪೋಷಕರಲ್ಲಿಯೇ ಒಬ್ಬರಾಗಿರಬೇಕು ಎಂಬುದು ಮನೆಯ ಇತರ ಎಲ್ಲಾ ವಯಸ್ಕರಿಗೂ ಸ್ಪಷ್ಟವಾಗಿ ತಿಳಿಸುವುದು ಕೂಡಾ ಪೋಷಕರ ಜವಾಬ್ದಾರಿಯಾಗಿರುತ್ತದೆ.

ಯುವ ತಾಯಿಗೆ ತನ್ನ ನಿರ್ಧಾರವನ್ನು ಪ್ರತಿಪಾದಿಸುವುದು ಭಯಾನಕ ಮತ್ತು ಒತ್ತಡದ ಕೆಲಸವಾಗಿರುತ್ತದೆ ಮತ್ತು ಅವಳ ಸಂಗಾತಿಯ ಬೆಂಬಲ ಬೇಕು. ಇದು ವಿಶೇಷವಾಗಿ ಪೋಷಕರಿಗೆ ಮತ್ತು ಮಾವಂದಿರಿಗೆ ಸವಾಲು ಮತ್ತು ಉಪಾಯದಿಂದ ಮಾಡುವ ಕೆಲಸವಾಗಿರುತ್ತದೆ. ಸಂಘರ್ಷ-ಮುಕ್ತ ಸಂತೋಷದ ವಾತಾವರಣದಲ್ಲಿ ಮಕ್ಕಳನ್ನು ಬೆಳೆಸುವ ಪ್ರಯೋಜನಗಳನ್ನು ಪೋಷಕರು / ಅಳಿಯಂದಿರಿಗೆ ವಿವರಿಸಿದರೆ ಇಂತಹ ಸಂದರ್ಭಗಳನ್ನು ಉತ್ತಮವಾಗಿ ನಿಭಾಯಿಸಬಹುದು.

4)ಅಜ್ಜ-ಅಜ್ಜಿಯಂದಿರು ಕೂಡಾ ಒಂದು ಕಾಲದಲ್ಲಿ ಪೋಷಕರಾಗಿದ್ದರು.

ನಿಮ್ಮ ಪೋಷಕರೂ ಕೂಡಾ ಅವರ ಪೋಷಕರಿಂದ ಬೆಳೆದಿದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ ಮತ್ತು ಮಕ್ಕಳನ್ನು ಬೆಳೆಸುವಲ್ಲಿ ಅವರ ಅನುಭವ ಮತ್ತು ಬುದ್ದಿವಂತಿಕೆಯನ್ನೂ ಪರಿಗಣಿಸಿ.ಇದು ಮಕ್ಕಳ ಮೇಲೆ‌ ಬಹುದೊಡ್ಡ ಪರಿಣಾಮ‌ ಬೀರುತ್ತದೆ.ಪೋಷಕರು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಮತ್ತು ಪರಿಹಾರವನ್ನು ಕಂಡುಕೊಳ್ಳುವಲ್ಲಿ ಅವರ ಸಲಹೆಯನ್ನು ಪಡೆಯಬೇಕು.ಅಜ್ಜ-ಅಜ್ಜಿಯಂದಿರಿಗೆ ,ಮಕ್ಕಳನ್ನು ಬೆಳೆಸುವಲ್ಲಿ ತಮ್ಮ ಪಾತ್ರ ಬಹಳ ಮುಖ್ಯದ್ದಾಗಿದೆ ಮತ್ತು ತಮ್ಮ ಸಲಹೆಗಳಿಗೆ ಯಾವತ್ತೂ ಬೆಲೆಯಿರುತ್ತದೆ ಎಂದು ತಿಳಿಯುವಂತೆ ಮಾಡಬೇಕು.ಅಜ್ಜ-ಅಜ್ಜಿಯಂದಿರು ಹೆಚ್ಚಾಗಿ ಪರಿಹಾರವನ್ನು ನೀಡುತ್ತಾರೆ ಮತ್ತು ಮಕ್ಕಳಿಗೆ ಚೌಕಟ್ಟನ್ನು ಹೊಂದಿಸಲು ಪೋಷಕರಿಗೆ ಅವಕಾಶ ನೀಡುತ್ತಾರೆ.

ಕೊನೆಯದಾಗಿ, 5 ನೇ ಕಾರ್ಯತಂತ್ರವೇನೆಂದರೆ ಈ ಲೇಖನವನ್ನು ಅಜ್ಜ-ಅಜ್ಜಿಯರೊಂದಿಗೆ ಹಂಚಿಕೊಳ್ಳುವುದು ಮತ್ತು ಮಕ್ಕಳನ್ನು ಮತ್ತು ಕುಟುಂಬವನ್ನು ಸಂತೋಷದಿಂದ ಬೆಳೆಸಲು ಇನ್ನೂ ಕೆಲವು ಪರಿಣಾಮಕಾರಿ ತಂತ್ರಗಳನ್ನು ಸೇರಿಸಲು ಕೇಳಿಕೊಳ್ಳುವುದು.

Your feedback please

Like
Like Wow Sad
000000

Share & Save

What is your Reaction?

We appreciate your feedback

Feedback (Optional)